Skip to main content

Posts

Showing posts from November, 2020

ಗೆಲುವಿನ ಗುಟ್ಟು

  ಒಮ್ಮೆ , ಯಾವಾಗಾದರು ಹಾಗೆ ಕಲ್ಪಿಸಿಕೊಳ್ಳಿ , ಪ್ರಶಾಂತವಾದ ಸಂಜೆಯ ಸಮಯದ್ಲಲೋ , ಇಲ್ಲಾ ಇಂಪಾದ ಸಂಗೀತವನ್ನು ಆಲಿಸುತ್ತಾದರೋ , ನೀವು ಜೀವನದ ಕಷ್ಟ - ಕಟ್ಟೊಲೆಗಳನ್ನು ದಾಟಿ , ಹಿಂಜರಿಯದ ಛಾತಿಯನೊಡ್ಡಿ ಗೆಲವನ್ನು ಸಂಪಾದಿಸಿದಿರಿಯೆಂದು !! ಎಂತಹ ಉನ್ಮಾಧ ಸ್ಥಿತಿ ನೀವು ಅನುಭವಿಸುವಿರಿ ಅಲ್ಲವೇ ? ಅದುವೇ ಗೆಲುವಿನ " ಅಫಿಮು "," ಗಾಂಜಾ " . ಗೆಲುವಿನ ನಶೆಯನ್ನು ಒಮ್ಮೆ ಬೆನ್ನಹತ್ತಿದರೆ ಬೇರೆಯಾವ ನಶೆ ನಮ್ಮ ಮೆದುಳಿಗೆ ಉನ್ಮಾಧ ಸ್ಥಿತಿಗೆ   ಒಯ್ಯಲಾರವು. ಎಲ್ಲರು ಗೆಲುವನ್ನು ಅನುಭವಿಸಬೇಕು , ಸಾಧಿಸಬೇಕು ಅಂದಿಕೊಂಡವರೇ , ಆದರೆ ಗೆಲುವಿನ ಹಾದಿಯಲ್ಲಿ ಎದರಾಗುವ ಸೋಲು , ಭಯ , ಹಿಂಜರಿಕೆ , ಅವಮರ್ಯಾದೆಗಳಿಂದ ಹತಾಶರಾಗಿ ಪ್ರಯತ್ನ ಮಾಡುವದನ್ನೇ ಬಿಡುತ್ತಾರೆ . “ ಗೆಲುವಿನ ತುಡಿತಕ್ಕಿಂತಲೂ ಸೋಲಿನ ಭಯ” ಅವರನ್ನು ಆವರಿಸಿಕೊಂಡಾಗ ಗೆಲವು ಮರೀಚಿಕೆವಾಗಿ ಸೋಲೆಂಬ ನಿತ್ರಾಣ ಭಾವ ಕಾಡತೊಡಗುತ್ತದೆ . ಹೇಗೆ ನಾವುಗಳು ಸೋಲಿನ ಸರಪಳಿಯನ್ನು ಕಿತ್ತಎಸೆದು ಗೆಲುವಿನ ಪತಾಕೆಯನ್ನು ಹಾರಿಸಬಹುದು ? ಗೆಲುವಿನ ಗುಟ್ಟಾದರು ಏನು ? " ಗೆಲುವಿನ ಗುಟ್ಟಡಗಿರುವುದು ಸೋಲಿನ ಅಂಚಿನಲ್ಲಿ " ಯಾರು ಸೋಲನ್ನು ಮನಸಾ ಸ್ವೀಕರಿಸಿ ಅದನ್ನು ಅಷ್ಟೇ ಪ್ರಜ್ಞಾಪೂರ್ವಕನಾಗಿ ವಿಶ್ಲೇಶಿಸಿ ಅದನ್ನು ಮುಂದೆ ಹೇಗೆ ನಿಭಾ...